ಸಂಪದದಲ್ಲಿ ಹೊಸತು! | Sign up | Login | Font Help
Planet Kannada | ಪ್ಲಾನೆಟ್ ಕನ್ನಡ
  • Sampada Initiative
  • Kannada Learning Center
  • Sampada Community
  • ಸಂಪರ್ಕಿಸಿ
Home › ಪ್ಲಾನೆಟ್ ಕನ್ನಡ

ಚೆಂಡೆಮದ್ದಳೆ

Syndicate content
ಕಡಲಿಗೆ ಹೆಬ್ಬಾಗಿಲುಗಳಿಲ್ಲ...
URL: http://chendemaddale.wordpress.com
Updated: 1 hour 29 min ago

ಹೊಸ ಬ್ಲಾಗ್ “ಪಾಕ ಚಂದ್ರಿಕೆ’ !

Fri, 2008-09-05 23:57
ಏನೋ, ಸುಮ್ಮನೆ ಒಂದಿಷ್ಟು ಪಾಕ ಸಂಗತಿಗಳನ್ನು ಬರೆದೆ. ಒಳ್ಳೆಯ ಮಾತುಗಳನ್ನು ಆಡಿದರು. ನನಗೂ ಸ್ವಲ್ಪ ಅಡುಗೆ ಬಗ್ಗೆ ಕುತೂಹಲವಿದ್ದೇ ಇದೆ. ಅದು ಮುಂಚಿಂದಲೂ. ಅದನ್ನೇ ಬ್ಲಾಗ್‌ನಲ್ಲಿ ಹಂಚಿಕೊಳ್ಳಬೇಕೆಂದೆನಿಸಿತ್ತು. ನನ್ನ ಚೆಂಡೆಮದ್ದಳೆಯಲ್ಲೇ ಕೆಲವು “ರೆಸಿಪಿ’ಗಳನ್ನು ಬರೆದೆ. ಆದರೆ ಪದ್ಯ, ಗದ್ಯ, ಬ್ರಹ್ಮಚಾರಿಗಳ ಪುಟ…ಇತ್ಯಾದಿಗಳ ಮಧ್ಯೆ ಯಾಕೋ ನನ್ನ ಪಾಕ ಸಂಗತಿ ರುಚಿಸುವುದಿಲ್ಲ ಎನಿಸತೊಡಗಿತು. ಹಾಗೆಂದು ಅದನ್ನು ಸಂಪೂರ್ಣ ಬಿಟ್ಟು ಬಿಡಲು ಮನಸ್ಸೂ ಇಲ್ಲ. ಅದಕ್ಕೇ ನನ್ನದೇ ಹೊಸದು “ಪಾಕ ಚಂದ್ರಿಕೆ’ ಎಂಬ ಹೊಸ ಬ್ಲಾಗ್ ಆರಂಭಿಸಿದ್ದೇನೆ. ಅದರಲ್ಲೇನಿದ್ದರೂ ಪಾಕದ ಬಗ್ಗೆಯೇ [...]
Categories: ಕನ್ನಡ ಪುಟಗಳು

ಬಿಕ್ಕಿದ ಸಾಲುಗಳು ಹೊಸತು

Thu, 2008-09-04 23:56
ನಡೆದ ಪಾದಗಳು ಸವೆದಿವೆ ಒಂದೆರಡೂ ಗೆರೆಗಳು ಉಳಿದಿಲ್ಲ ನನ್ನದೆಂದು ಹೇಳಲಿಕ್ಕೆ *** ಮೌನದೊಳಗೆ ಹೊಕ್ಕು ಒಂದಾಗಿ ಬಿಡಲು ಮಾತು ಬಿಡುತ್ತಿಲ್ಲ *** ಅವಳ ಮುಂದೆ ಎಲ್ಲವನ್ನೂ ತೆರೆದಿಡಲು ಹೋದೆ ಯಾಕೋ ಮನಸ್ಸಾಗಲಿಲ್ಲ ನನ್ನೊಳಗೇ ಅವಿತುಕೊಂಡ ನನಗೆ ಅವಳೂ ಕಾಣದಾದಳು !
Categories: ಕನ್ನಡ ಪುಟಗಳು

ಹೊಸ ಪದ್ಯ-ಮತ್ತೆ ಗಾಳಿ ಬೀಸುವವರೆಗೆ

Fri, 2008-08-22 22:30
ನೆನಪು ಹಳೆಯದಾಯಿತು… ಇಬ್ಬರೂ ಕೂಡಿ ಇಟ್ಟ ಹೆಜ್ಜೆಗೂ ವಯಸ್ಸಾಯಿತು ಬರುವ ಮುಂದಿನ ಗಾಳಿಗೆ ಇದರ ಆಯಸ್ಸು ತೀರಬಹುದು ಹೊಸ ಗುರುತು ಮೂಡಿಸುವ ಹುಮ್ಮಸ್ಸು ಇಬ್ಬರಲ್ಲೂ ಉಳಿದಿಲ್ಲ ಹಳೆಯದ್ದರ ಜಾಡು ಹಿಡಿದು ಹೊರಟಿದ್ದೇವೆ, ಏನೂ ಸಿಗುತ್ತಿಲ್ಲ ನಾವು ಬದುಕಿದ್ದೇವೆ ಎಂಬುದಕ್ಕೆ ಪ್ರಮಾಣಪತ್ರಗಳ ಬಿಟ್ಟರೆ ಬೇರೇನೋ ಉಳಿದಿಲ್ಲ ಇಬ್ಬರೂ ಕಲೆತು ಹರಟಿದ ಕಲ್ಲು ಬೆಂಚುಗಳು ಜೀರ್ಣಗೊಂಡಿವೆ ಸದಾ ಗುರಾಯಿಸುತ್ತಿದ್ದ ಕಾವಲುಗಾರನದ್ದೂ ಹೊಸ ಪೀಳಿಗೆ, ಅಪರಿಚಿತ ಉಸುಕಿನ ಮೇಲೆ ನಡೆದೂ ನಡೆದೂ ಅಭ್ಯಾಸ ಇತಿಹಾಸ ಸೃಷ್ಟಿಸುವ ಹಠವೂ ಇರಲಿಲ್ಲ ಇಬ್ಬರೂ ಕೊಟ್ಟದ್ದು-ಪಡೆದದ್ದಕ್ಕೆ ಸಾಕ್ಷ್ಯ ಉಳಿದಿಲ್ಲ ಒಲವು ಸಾಕ್ಷ್ಯವಾಗುವುದಿಲ್ಲ ಎಣ್ಣೆ ಮುಗಿಯುವವರೆಗೆ ದೀಪ ಆರುವುದಿಲ್ಲ ಮತ್ತಷ್ಟು ದೂರ ನಡೆಯಬಲ್ಲೆವು ಅಲ್ಲಿಯವರೆಗೆ… ಮೂಡಿದರೆ ನಾಲ್ಕಾರು ಹೆಜ್ಜೆ ಮತ್ತೆ ಗಾಳಿ ಬೀಸುವವರೆಗೆ
Categories: ಕನ್ನಡ ಪುಟಗಳು

ಮೆಂತ್ಯ ಹುಳಿ

Sun, 2008-08-17 11:43
ಬಹಳ ದಿನಗಳ ಮೇಲೆ ಮತ್ತೊಂದು “ರುಚಿ’ ಹೇಳುವ ಪ್ರಯತ್ನ. “ಗರಿಮುರಿ ಈರುಳ್ಳಿ ಪಕೋಡ’ ಚೆನ್ನಾಗಿದೆ ಎಂದು ಪ್ರೋತ್ಸಾಹಿಸಿದ್ದಕ್ಕೆ ಇದು. ಹೇಗಿದೆ ಎಂದು ದಯವಿಟ್ಟು ಹೇಳಿ.ಸಾಮಾನ್ಯವಾಗಿ ಮೆಂತ್ಯ ಹುಳಿ (ಸಾಂಬಾರ್) ಎಂದರೆ ಮೆಂತ್ಯೆ ಸೊಪ್ಪಿನದು. ಆದರೆ ನಾನು ಹೇಳುತ್ತಿರುವುದು ಮೆಂತ್ಯ ಕಾಳಿನದು. ಬಹಳ ವಿಶಿಷ್ಟ. ಆದರೆ ಕಷ್ಟವೇನೂ ಇಲ್ಲ. ಕಹಿ ಎಂದು ಭಯ ಪಡಬೇಕಿಲ್ಲ. ನಾಲ್ಕಕ್ಕೆ ಒಂದರಷ್ಟು ಮೆಂತ್ಯೆ ಬೇಕು. ಅಂದರೆ ನಾಲ್ಕು ಮುಷ್ಠಿ ತೊಗರಿ ಬೇಳೆಗೆ ಒಂದು ಮುಷ್ಠಿ (ಸ್ವಲ್ಪ ಅದಕ್ಕಿಂತ ಕಡಿಮೆಯಾದರೂ ಪರವಾಗಿಲ್ಲ) ಮೆಂತ್ಯೆ ಹಾಕಬೇಕು. ಟೊಮೇಟೊವನ್ನು [...]
Categories: ಕನ್ನಡ ಪುಟಗಳು

ಪೂರ್ಣಗೊಳ್ಳದ ಚಿತ್ರ

Tue, 2008-08-12 20:34
ಬಂದ ಪತ್ರದಲ್ಲಿ ಮೂರೇ ಪದಗಳಿದ್ದವು. “ಎಲ್ಲರಿಗೂ ನಮಸ್ಕಾರ, ವಂದೇ’. ಪತ್ರ ತೆರೆದವನ ಮನಸ್ಸು ವ್ಯಾಕುಲಗೊಂಡಿತು; ತೀರಾ. ಏನೂ ಹೇಳಲು ತೋಚಲಿಲ್ಲ. ಸುಮ್ಮನೆ ಗೋಡೆಯನ್ನು ನೋಡುತ್ತಾ ಕುಳಿತ. ಗೋಡೆಯ ಎದುರು ನಾಲ್ಕೈದು ಚಿತ್ರಗಳಿದ್ದವು. ಯಾವುದಕ್ಕೂ ಬಣ್ಣ ಬಳಿದಿರಲಿಲ್ಲ. ಗೋಡೆಯ ಬಣ್ಣವನ್ನೂ ಹೊದ್ದುಕೊಂಡಿರಲಿಲ್ಲ. ಒಂದು ಮನುಷ್ಯನ ಚಿತ್ರ. ಥೇಟ್ ಅವನನ್ನೇ ಹೋಲುವಂಥದ್ದು. ಕಾಲುಗಳು ತೀರಾ ತೆಳ್ಳಗೆ, ಕೈಗಳೂ ಭಿನ್ನವಾಗಿರಲಿಲ್ಲ. ಮುಖ ಮಾತ್ರ ದಪ್ಪ. ಅದರ ಮಧ್ಯೆ ಕಣ್ಣಿಗೆ ದೃಷ್ಟಿಯೇ ಇರಲಿಲ್ಲ. ಹೀಗೆ ಏನೇನೋ ಆಗಿ ಅವನನ್ನೇ ನೆನಪಿಸುತ್ತಿತ್ತು. ಅದನ್ನು ಕಂಡು ಎಷ್ಟು [...]
Categories: ಕನ್ನಡ ಪುಟಗಳು

ಬಿಕ್ಕಿದ ಸಾಲುಗಳು-ಕೊನೆಯ ಕಂತಲ್ಲ

Tue, 2008-08-12 00:05
ಮಳೆ ನಿಂತ ಮೇಲೆ ಹನಿ ಉದುರಿತು ಅದು ಬಿಕ್ಕಿ ಬಿಕ್ಕಿ ಅತ್ತ ಮುಗಿಲಿನ ಕೊನೆ ಹನಿ **** ದೀಪ ಆರದಿರಲಿ ಎಂಬುದು ನನ್ನ ಕಾಳಜಿ ಅದರೊಳಗೆ ಅವನಿದ್ದಾನೆ ಕಣ್ಣತುಂಬುತ್ತಾನೆ ಆರಿದ ಹೊತ್ತು ನಾನೂ ಕಣ್ಣ ಮುಚ್ಚುತ್ತೇನೆ ! **** ಕಣ್ಣಂಚಿಗೆ ಬಂದು ನಿಂತ ಹನಿಗೂ ಅವಳ ಮೇಲೆ ಕರುಣೆ ಉದುರಿ ಹಗುರವಾಗಿಸಿತು ! *****
Categories: ಕನ್ನಡ ಪುಟಗಳು

ನಮ್ಮ ಸ್ವಾತಂತ್ರ್ಯ ದಿನಾಚರಣೆ !

Wed, 2008-08-06 23:22
ಪುಟ ಹತ್ತು ಇಂಥ ಸಹಕಾರಿಗಳಾದ ನಮ್ಮದು ವಿಚಿತ್ರ ತಮಾಷೆಯ ಬದುಕು. ಹಲವು ಘಟನೆಗಳು ಮಾಸಿ ಹೋಗಿರುವಾಗ ರಾತ್ರೆಯಷ್ಟೇ ಹರ್ಷನಿಗೆ ಫೋನ್ ಮಾಡಿದ್ದೆ. ಒಂದೊಂದೇ ನೆನಪಿನ ಗರಿ ಷೋಕೇಸ್‌ನಲ್ಲಿಡತೊಡಗಿದ. ಒಂದರ ಬಣ್ಣವೂ ಮಾಸಿರಲಿಲ್ಲ. ಹಾಗೆಯೇ ಫಳ ಫಳ ಹೊಳೆಯುತ್ತಿತ್ತು. ಆಗಸ್ಟ್ ೧೫ ಕ್ಕೆ ಇನ್ನೇನು ಒಂಬತ್ತು ದಿನ ಬಾಕಿಯಿದೆ. ಅದಕ್ಕೇ ಸಂಬಂಧಿಸಿದ ಒಂದು ಘಟನೆಯನ್ನು ವಿವರಿಸುತ್ತೇನೆ. ಅದು ನಮ್ಮ “ಗುಣಾವಗುಣ’ಗಳನ್ನು ಹೇಳಬಹುದು ಎಂಬುದು ನನ್ನ ಲೆಕ್ಕಾಚಾರ. ಆಗಸ್ಟ್ ೧೫ ಎಂದಿನಂತೆಯೇ ಬಂತು ಎಲ್ಲರಿಗೂ, ಆದರೆ ನಮಗೆ ಮಾತ್ರ ಅಲ್ಲ. ಮೊದಲೇ ಹೇಳಿದಂತೆ [...]
Categories: ಕನ್ನಡ ಪುಟಗಳು

ಬ್ರಹ್ಮಚಾರಿಗಳ ಪುಟ ಒಂಬತ್ತು

Fri, 2008-08-01 19:59
ಅಧ್ಯಾಯ ಒಂಬತ್ತು ಚುನಾವಣೆ ಸೇರಿದಂತೆ ಹತ್ತು ಹಲವು “ಬ್ಯುಸಿ’ ನಡುವೆ ಕಳೆದು ಹೋಗಿದ್ದೆ. ಆಗಾಗ್ಗೆ ಬೇರೆ ಬರಹಗಳನ್ನು ಹಾಕುತ್ತಿದ್ದರೂ ಧಾರಾವಾಹಿ ಮುಂದುವರಿಸಲು ಆಗಿರಲಿಲ್ಲ. ಇನ್ನು ಮುಂದೆ ವಾರಕ್ಕೊಮ್ಮೆ ಧಾರಾವಾಹಿ ಅಪ್‌ಟುಡೇಟ್ ಮಾಡುವ “ಶಪಥ’ ಮಾಡಿದ್ದೇನೆ. ನೋಡಬೇಕು… ಅಂದ ಹಾಗೆ ಈ “ಸ್ಕೂಪ್’ ಪ್ರಕರಣ ನಮ್ಮೊಳಗೆ ತುಂಬಿದ ಆತ್ಮವಿಶ್ವಾಸ ಅಪಾರ. ಅಷ್ಟೇ ಅಲ್ಲ. ನಮ್ಮ ನಡುವಿನ ಬಂಧವನ್ನೂ ಇನ್ನಷ್ಟು ಬಿಗಿಯಿತು. ಹೊಸ ಕನಸು ಅರಳಿಕೊಂಡಿದ್ದ ಬಗೆಯೂ ಹಾಗೆಯೇ. ಎಲ್ಲರೂ ಒಟ್ಟಿಗಿದ್ದರೆ ಚೆಂದವಾದೀತೆಂಬ ಅನಿಸಿಕೆಯೂ ನಮ್ಮದಾಗಿತ್ತು. ಸಿಗದಾಳನೊಡನೆ ಕುಳಿತು ಚರ್ಚಿಸಿ ಒಂದು ತೀರ್ಮಾನಕ್ಕೆ [...]
Categories: ಕನ್ನಡ ಪುಟಗಳು

ಅವನು ಸಾಯಲೆಂದೇ ಬದುಕುತ್ತಿದ್ದಾನೆ…

Thu, 2008-07-24 23:24
ಸಾವಿಗೆ ಕಾಯವುದು ಎಂದರೆ …!? ಬಹಳ ಕಷ್ಟ. ಅದರಲ್ಲೂ ಬದುಕಬೇಕೆಂದು ಬಯಸಿದವ ಸಾವನ್ನು ನಿರೀಕ್ಷಿಸುತ್ತಾ ಕುಳಿತುಕೊಳ್ಳುವುದು ರಣಹಿಂಸೆ. ಈಗ ಆ ರಣಹಿಂಸೆಯನ್ನು ಅನುಭವಿಸಬೇಕಾದವ ಶ್ರದ್ಧಾನಂದ. ಇವನ ಬಗ್ಗೆ ಎಲ್ಲರಿಗೂ ತಿಳಿದಿರಬೇಕು. ಆದರೂ ಕೊಂಚ ಮಾಹಿತಿ. ೧೯೯೧ ರ ಏಪ್ರಿಲ್ ೨೮ ರಂದು ತನ್ನ ಪತ್ನಿ ಬೇಗಂ ಶಕೀರಾ ನಮಾಜಿ ಅವರನ್ನು ಕೊಂದಿದ್ದ. ಇವನ ನಿಜವಾದ ಹೆಸರು ಮುರಳಿ ಮನೋಹರ್ ಮಿಶ್ರಾ. ಬೆಂಗಳೂರಿನ ರಿಚ್ಮಂಡ್ ರಸ್ತೆಯ ತನ್ನ ಬಂಗಲೆಯ ಕಾಂಪೌಂಡ್ ಮೂಲೆಯೊಂದರಲ್ಲಿ ಹೆಣವನ್ನು ಹೂತ. ಸರಿ, ಎಲ್ಲದರಂತೆ ಮುಚ್ಚಿ ಹೋಗಿತ್ತು. ನಂತರ [...]
Categories: ಕನ್ನಡ ಪುಟಗಳು

ದೇವರ ಮಕ್ಕಳು ನಾವೆಲ್ಲಾ…

Fri, 2008-07-18 23:24
ಮತ್ತೆ ಒಂದು ಚಿತ್ರದ ಬಗ್ಗೆ ಹೇಳಬೇಕೆಂದಿದ್ದೆ. ಬೇಡ ಎನಿಸಿ ಪಾತ್ರದ ಬಗ್ಗೆ ಹೇಳುತ್ತಿದ್ದೇನೆ. ನನ್ನೊಳಗೆ ಕಾಡಿದ ಪಾತ್ರ ಹಲವಿವೆ. ಆದರೆ ನನ್ನೊಳಗೆ ಅಚ್ಚೊತ್ತಿದ್ದದ್ದು ಕೆಲವೇ ಕೆಲವು. ಅದರಲ್ಲೂ “ದೇವರ ಮಕ್ಕಳು’ ಚಿತ್ರದಲ್ಲಿ ಭಿಕ್ಷೆಯ ತಟ್ಟೆ ಹಿಡಿದು ಬರುವ ಪುಟ್ಟ ಹುಡುಗನ ಪಾತ್ರ ಇಂದಿಗೂ ನನ್ನನ್ನು ಬಿಟ್ಟಿಲ್ಲ. ಅದು ಏಕೋ ನನಗೂ ಗೊತ್ತಿಲ್ಲ. ರಸ್ತೆಯಲ್ಲಿ ನಡೆಯುವಾಗಲೆಲ್ಲಾ ಬಿಂಬಗಳಂತೆ ಕಾಡುತ್ತಾನೆ. ಸತ್ಯವಾಗಲೂ ಆ ಪಾತ್ರ ನಿರ್ವಹಿಸಿದ ಹುಡುಗನಾಗಲೀ, ಅವನ ವಿವರವಾಗಲೀ ತಿಳಿದುಕೊಂಡೂ ಇಲ್ಲ. ಇತ್ತೀಚೆಗೆ ಗೆಳೆಯ ಪ್ರವೀಣನ ಜತೆಗೆ ಡಿವಿಡಿ ಅಂಗಡಿಗೆ [...]
Categories: ಕನ್ನಡ ಪುಟಗಳು

ಸಂಪಿಗೆ ಸಂಸಾರ

Tue, 2008-07-15 00:09
ಹೆಸರು ನಂಜಮ್ಮ. ಸುಮಾರು ಎಂಬತ್ತರ ಪ್ರಾಯ. ಸುಕ್ಕು ಗಟ್ಟಿದ ಮುಖ. ಒಳಗೆ ಹೆಪ್ಪುಗಟ್ಟಿದ ದುಃಖ. ಅದರ ಮಧ್ಯೆಯೂ ತೆಳ್ಳಗೆ ಬೆಳ್ಳಿಗೆರೆಯ ಹಾಗೆ ತೇಲಿ ಬರುವ ಪುಟ್ಟದೊಂದು ನಗೆ. ಅದು ಮುಖದ ಅಂದವನ್ನೇ ಬದಲಿಸುವಷ್ಟು ಸಾಮರ್ಥ್ಯವುಳ್ಳದ್ದು. ಕೆ.ಆರ್. ಮಾರುಕಟ್ಟೆಯ ಒಳಗೆ ಪ್ರವೇಶಿಸುವಾಗಲೇ ಅವಳು ಎಲ್ಲರನ್ನೂ ಎದುರುಗೊಳ್ಳುತ್ತಾಳೆ. ತನ್ನೆದುರಿಗಿದ್ದ ಸಂಪಿಗೆ ರಾಶಿಯನ್ನು ಕಾಣುತ್ತಲೇ ಜೀವನ ಸವೆಸುತ್ತಾಳೆ. ಕೆಂಡಸಂಪಿಗೆಯಂತೆ ಎದುರಿಗೆ ಬಂದ ಗಿರಾಕಿಯ ಕಂಡು ನಗುತ್ತಾಳೆ. ಐದು ರೂ. ಗೆ ಏಳರಿಂದ ಎಂಟು, ಹತ್ತು ರೂ. ಗೆ ಈ ಲೆಕ್ಕಕ್ಕಿಂತ ಇನ್ನೂ ಕೊಂಚ [...]
Categories: ಕನ್ನಡ ಪುಟಗಳು

Planet Kannada brought to you by Sampada Community via Sampada Foundation.
Setup and designed by Hari Prasad Nadig.

separator