ಸಂಪದದಲ್ಲಿ ಹೊಸತು! | Sign up | Login | Font Help
Planet Kannada | ಪ್ಲಾನೆಟ್ ಕನ್ನಡ
  • Sampada Initiative
  • Kannada Learning Center
  • Sampada Community
  • ಸಂಪರ್ಕಿಸಿ
Home › ಪ್ಲಾನೆಟ್ ಕನ್ನಡ

ಹರಿದಾಸ ಸಂಪದ

Syndicate content
URL: http://haridasa.in
Updated: 1 hour 3 min ago

ಬೇವು ಬೆಲ್ಲದೊಳಿಡಲೇನು ಫಲ

10 hours 32 min ago

(ರಾಗ ಬೇಹಾಗ್ ಆದಿತಾಳ)
ಬೇವು ಬೆಲ್ಲದೊಳಿಡಲೇನು ಫಲ ?
ಹವಿಗೆ ಹಾಲೆರೆದೇನು ಫಲ ? ||ಪ||

ಕುಟಿಲವ ಬಿಡದಿಹ ಕುಜನರು ಮಂತ್ರದ
ಪಠನವ ಮಾಡಿದರೇನು ಫಲ ? |
ಸಟೆಯನ್ನಾಡುವ ಮನುಜರು ಮನದಲಿ
ವಿಠಲನ ನೆನೆದರೇನು ಫಲ? ||

ಕಪಟತನದಿ ವಂಚಿಸುವ ಮನುಜರು
ಜಪಗಳ ಮಾಡಿದರೇನು ಫಲ? |  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ದೇವ ಬಂದ ನಮ್ಮ ಸ್ವಾಮಿ ಬಂದನೋ

10 hours 44 min ago

( ರಾಗ ಶಂಕರಾಭರಣ ಆದಿತಾಳ)
ದೇವ ಬಂದ ನಮ್ಮ ಸ್ವಾಮಿ ಬಂದನೋ
ದೇವರ ದೇವ ಶಿಖಾಮಣಿ ಬಂದನೋ ||ಪ||

ಉರಗ ಶಯನ ಬಂದ ಗರುಡ ಗಮನ ಬಂದ
ನರಗೊಲಿದವ ಬಂದ ನಾರಾಯಣ ಬಂದ ||

ಮಂದರಧರ ಬಂದ ಮಾಮನೋಹರ ಬಂದ
ಬೃಂದಾವನಪತಿ ಗೋವಿಂದ ಬಂದನೋ ||

ಪೂತನಿ ಸಂಹರಣ ಬಂದ ಪುರುಹೂತವಂದ್ಯ ಬಂದ  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ಏನು ಧನ್ಯಳೋ ಲಕುಮಿ

Tue, 2009-01-06 03:19

(ರಾಗ ತೋಡಿ ಅಟತಾಳ)
ಏನು ಧನ್ಯಳೋ ಲಕುಮಿ
ಎಂಥ ಮಾನ್ಯಳೋ
ಸಾನುರಾಗದಿಂದ ಹರಿಯ
ತಾನೆ ಸೇವೆ ಮಾಡುತಿಹಳೋ ||ಪ|

ಕೋಟಿ ಕೋಟಿ ಭೃತ್ಯರಿರಲು
ಹಾಟಕಾಂಬರನ ಸೇವೆ
ಸಾಟಿಯಿಲ್ಲದೆ ಮಾಡಿ
ಪೂರ್ಣನೋಟದಿಂದ ಸುಖಿಸುತಿಹಳೋ || ೧||

ಛತ್ರ ಚಾಮರ ವ್ಯಜನ ಪರ್ಯಂಕ
ಪಾತ್ರರೂಪದಲ್ಲಿ ನಿಂತು  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ಯಾದವ ನೀ ಬಾ

Tue, 2009-01-06 03:12

(ರಾಗ ಕಾಂಭೋಜ ಏಕತಾಳ)

ಯಾದವ ನೀ ಬಾ ಯದುಕುಲನಂದನ |
ಮಾಧವ ಮಧುಸೂಧನ ಬಾರೋ ||
ಸೋದರ ಮಾವನ ಮಧುರೆಲಿ ಮಡುಹಿದ ಯ-
ಶೋದೆಕಂದ ನೀ ಬಾರೋ || ಪ||

ಶಂಖಚಕ್ರವು ಕೈಯಲಿ ಹೊಳೆಯುತ |
ಬಿಂಕದ ಗೋವಳ ನೀ ಬಾರೋ ||
ಅಕಳಂಕಮಹಿಮನೆ ಆದಿನಾರಾಯಣ |
ಬೇಕೆಂಬ ಭಕುತರಿಗೊಲಿಬಾರೋ || ೧||  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ

Tue, 2009-01-06 02:57

(ರಾಗ ಕಾಂಭೋಜ ತ್ರಿಪುಟತಾಳ)

ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ ||ಪ||

ಕಷ್ಟಗಳೆಲ್ಲಾ ಪರಿಹರಿಸಿ ಮನ-

ದಿಷ್ಟಾರ್ಥಗಳನೆಲ್ಲಾ ಕೊಟ್ಟು ರಕ್ಷಿಸುವಂಥ || ಅ||

ಮಸ್ತಕದಲಿ ಮಾಣಿಕ್ಯದ ಕಿರೀಟ

ಕಸ್ತೂರಿ ತಿಲಕದಿಂದೆಸೆವ ಲಲಾಟ

ಶಿಸ್ತಿಲಿ ಕೊಳಲನೂದುವ ಓರೆ ನೋಟ  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ಅಳುವೊದ್ಯಾತಕೊ ರಂಗ

Tue, 2009-01-06 02:29

ರಾಗ: ಭೈರವಿ ಆದಿ ತಾಳ

ಅಳುವದ್ಯಾತಕೊ ರಂಗಾ | ಅತ್ತರಂಜಿಸುವ ಗುಮ್ಮಾ |ಪ|

ಪುಟ್ಟಿದೇಳು ದಿವಸದಲ್ಲಿ | ದುಷ್ಟ ಪೂತನಿಯ ಕೊಂದಿ |
ಮುಟ್ಟಿ ಮೊಲೆಯ ಹಾಲುಂಡ ಕಾರಣ | ದೃಷ್ಟಿ ತಾಕಿತೆ ನಿನಗೆ ಕಂದಯ್ಯ

ಬಾಲಕತನದಲ್ಲಿ ಗೋ | ಪಾಲರೊಡಗೂಡಿ  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ಚೋರಗೆ ಚಂದ್ರೋದಯ..........

Fri, 2009-01-02 11:11

ಈ ಉಗಾಭೋಗವನ್ನು ಶ್ರೀ ವಿದ್ಯಾಭೂಷಣರು ಪಂತುವರಾಳಿ ರಾಗದಲ್ಲಿ ಹಾಡಿದ್ದಾರೆ.

ಚೋರಗೆ ಚಂದ್ರೋದಯ ಸೊಗಸುವುದೇ
ಜಾರಗೆ ಸೂರ್ಯೋದಯ ಸೊಗಸುವುದೇ
ಶ್ರೀ ರಮಣನ ಕಥೆಯು ಕಳ್ಳಗೆ ಮೆಚ್ಚುವುದೇ|

ನಾರಿಗೆ ನಯವಿಲ್ಲದ ಚೆಲುವಿಕೆಯು
ಹರಿಸ್ಮರಣವಿಲ್ಲದ ಹಾಡಿಕೆಯು  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ ?

Fri, 2008-12-12 02:54

ಪಲ್ಲವಿ :

ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ ?

ಅನುಪಲ್ಲವಿ:

ಎಲ್ಲಿ ನೋಡಿದರಲ್ಲಿ ತಾನಿಲ್ಲದಿಲ್ಲವೆಂದು ಬಲ್ಲ ಜಾಣರು
ಚರಣ:

1: ನಂದಗೋಪನ ಮಂದಿರಗಳ ಸಂದುಗೊಂದಿನಲಿ
ಚಂದ ಚಂದದ ಗೋಪ ಬಾಲರ ವೃಂದ ವೃಂದದಲಿ
ಸುಂದರಾಂಗದ ಸುಂದರಿಯರ ಹಿಂದು ಮುಂದಿನಲಿ  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ಘಟಿಕಾಚಲದಿ ನಿಂತ ಶ್ರೀ ಹನುಮಂತ

Thu, 2008-12-11 02:31

ಘಟಿಕಾಚಲದಿ ನಿಂತ ಶ್ರೀ ಹನುಮಂತ
ಘಟಿಕಾಚಲದಿ ನಿಂತ ಪಟು ಹನುಮಂತನ ಪಠನೆಯ ಮಾಡಲುತ್ಕಟದಿ ಪೊರೆವೆನೆಂದು ||ಪಲ್ಲವಿ||

ಚತುರ ಯುಗದಿ ತಾನು ಮುಖ್ಯಪ್ರಾಣನು ಚತುರ್ಮುಖನಯ್ಯನ ಚತುರ ಮೂರುತಿಗಳ
ಚತುರತನದಿ ಭಜಿಸಿ ಚತುರ್ಮುಖನಾಗಿ ಜಗಕೆ ಚತುರ್ವಿಧ ಫಲ ಕೊಡುತ ||೧||  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ಮಾರುತನೆ ಏಳೆಂದು ಎಬ್ಬಿಸಿದಳಂಜನೆಯು

Thu, 2008-12-11 00:28

ಪಲ್ಲವಿ:

ಮಾರುತನೆ ಏಳೆಂದು ಎಬ್ಬಿಸಿದಳಂಜನೆಯು ಶ್ರೀ ರಾಮ ಸೇವೆಗೆ ತಡವಾಯಿತೇಳು

ಚರಣಗಳು:

ಸೇತು ಕಟ್ಟಲು ಬೇಕು ಶರಧಿ ದಾಟಲು ಬೇಕು
ಮಾತೆಗೆ ಉಂಗುರ ಕೊಡಲುಬೇಕು
ಪಾತಕಿ ರಾವಣನ ಶಿರವನಳಿಯಲುಬೇಕು
ಸೀತೆಪತಿ ರಾಮನಿಗೆ ನಮಿಸಬೇಕು

ಇಂತು ಕಳೆಯಲು ಬೇಕು ಅಜ್ಞಾತವಾಸವನು  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ಕಲ್ಯಾಣಂ ತುಳಸಿ ಕಲ್ಯಾಣಂ

Wed, 2008-12-10 11:14

ಕಲ್ಯಾಣಂ ತುಳಸಿ ಕಲ್ಯಾಣಂ
ಕಲ್ಯಾಣಂ ತುಳಸಿ ಕಲ್ಯಾಣಂ||

ಕಲ್ಯಾಣವೇ ನಮ್ಮ ಕೃಷ್ಣ ಶ್ರೀ ತುಳಸಿಗೆ
ಬಲ್ಲಿದ ಶ್ರೀ ವಾಸುದೇವನಿಗೆ||ಕಲ್ಯಾಣಂ..||

ಅಂಗಳದೊಳಗೆಲ್ಲ ತುಳಸಿಯ ವನ ಮಾಡಿ
ಶೃಂಗಾರ ಮಾಡಿ ಶೀಘ್ರದಿಂದ|
ಕಂಗಳ ಪಾಪವ ಪರಿಹರಿಸುವ ಮುದ್ದು  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ಬಾರೈ ಬಾರೈ ಭಾರತಿ ಮನೋಹರ

Wed, 2008-12-10 00:29

ಬಾರೈ ಬಾರೈ ಭಾರತಿ ಮನೋಹರ
ಮಾರುತಿ ಗುರುವರನೆ ದೇವ || ಪಲ್ಲವಿ ||

ಪವನದೇವ ಬಾರೊ
ಪವಿಸಮಗಾತ್ರ ಬಾರೊ
ರವಿಜನ ಭವಭಯಹರ
ಪಾವನ ಮೂರುತಿ || ೧ ||

ಮಧ್ವಮುನಿಯೆ ಬಾರೊ
ಉದ್ಧರಿಸಲು ಬಾರೊ
ಶುದ್ಧ ಮುಕುತಿದಾತ
ದದ್ಧಲಪುರವಾಸ || ೨ ||

ಗಂಧವಾಹನ ಬಾರೊ
ಸಿಂಧುಬಂಧನ ಬಾರೊ
ಮಂಧರೋದ್ಧರ ಶಾಮ

Categories: ಕನ್ನಡ ಪುಟಗಳು, ವಿಶೇಷ

ಈತ ಮುಖ್ಯ ಪ್ರಾಣನಾಥ

Wed, 2008-12-10 00:27

ರಾಗ ಬೇಹಾಗ್/ಅಟ್ಟ ತಾಳ

ಈತ ಮುಖ್ಯ ಪ್ರಾಣನಾಥ || ಪಲ್ಲವಿ ||

ಈತ ಶ್ರೀ ರಾಮ ಸೇವಕನೆನಿಸಿದಾತ || ಅನು ಪಲ್ಲವಿ ||

ಭಾನುವಿನ ತುಡಿಕಿದಾತ ಭಾರತಕೆ ಬಂದಾತ
ವಾನರೋತ್ತಮ ಹನುಮ ಹರಿಶರಣನೀತ || ೧ ||

ವಾರಿಧಿಯ ನೆಗೆದಾತ ವನಚರಾಗ್ರೇಸರನೀತ  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ಏಳೇಳು ಶರಧಿಯು ಏಕವಾಗಿದೆ ಕಂಡ್ಯ

Wed, 2008-12-10 00:23

ರಾಗ ಸೌರಾಷ್ಟ್ರ/ಅಟ್ಟ ತಾಳ

ಏಳೇಳು ಶರಧಿಯು ಏಕವಾಗಿದೆ ಕಂಡ್ಯ
ಹ್ಯಾಗೆ ಬಂದೆ ಹೇಳೊ ಕೋತಿ || ಪಲ್ಲವಿ ||

ಏಳು ಶರಧಿಯು ಎನಗೆ ಏಳು ಕಾಲುವೆಯು
ತೂಳಿ ಲಂಘಿಸಿ ಬಂದೆ ಭೂತ || ಅನು ಪಲ್ಲವಿ ||

ಏಳು ಸಮುದ್ರದೊಳಿರುವ ಮಕರಿ ಮತ್ಸ್ಯ
ಹ್ಯಾಗೆ ಬಿಟ್ಟರು ಹೇಳೊ ಕೋತಿ  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ದಾಸ ಶ್ರೇಷ್ಟರು ಕಂಡ ಉಡುಪಿಯ ಶ್ರೀಕೃಷ್ಣ - ಸಂಕ್ಷೀಪ್ತ ಪರಿಚಯ - ವಿವರಣೆ - ವಾದಿರಾಜರ ಕೃಷ್ಣ ಪ್ರೇಮ

Mon, 2008-12-08 12:52

ಹುಟ್ಟಿದ ತಕ್ಷಣ ಸಂನ್ಯಾಸ ಧರ್ಮದ ಆಶ್ರಮಕ್ಕೆ ಬಂದ ವಾದಿರಾಜರು ನೂರಿಪ್ಪತ್ತು ವರುಷಗಳ ಕಾಲ ಬರುಕಿದರು. ಇವರು ಉಡುಪಿಯ ಕೃಷ್ಣನ ಪರ್ಯಾಯ ಅವಧಿಯನ್ನು ಎರಡು ತಿಂಗಳಿಂದ ಎರಡು ವರುಷಗಳಿಗೆ ವಿಸ್ತರಿಸಿದವರು.  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ದಾಸ ಶ್ರೇಷ್ಟರು ಕಂಡ ಉಡುಪಿಯ ಶ್ರೀಕೃಷ್ಣ - ಸಂಕ್ಷೀಪ್ತ ಪರಿಚಯ - ವಿವರಣೆ - ಶ್ರೀಪಾದರಾಜರು ಮತ್ತು ಶ್ರೀವ್ಯಾಸರಾಜರು.

Sun, 2008-12-07 12:54

ಯುಗ ಯುಗಗಳಿಂದ ಗಾಢ-ಗೂಢವಾಗಿಯೇ ಉಳಿದ ಸಂಸ್ಕೃತದ ಮಹಾಮಂತ್ರಗಳನ್ನು, ಘನ ವಿಚಾರಗಳನ್ನು, ಸಾಮಾನ್ಯ ಜನರಿಗೂ ಅರ್ಥವಾಗುವ ತಿಳಿಗನ್ನಡದಲ್ಲಿ ಹಾಡು ಹೇಳುವ ಸಂಪ್ರದಾಯವನ್ನು ಶ್ರೀಪಾದರಾಜರು ವ್ಯಾಪಕವಾಗಿ ಪ್ರಾರಂಭಿಸಿದರು.  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ದಾಸ ಶ್ರೇಷ್ಟರು ಕಂಡ ಉಡುಪಿಯ ಶ್ರೀಕೃಷ್ಣ - ಸಂಕ್ಷೀಪ್ತ ಪರಿಚಯ - ವಿವರಣೆ

Sat, 2008-12-06 14:48

ಹರಿದಾಸರ ಮೂಲಸ್ಪೂರ್ತಿ ಪುರುಷ ಮಧ್ವಾಚಾರ್ಯರು. ಕೃಷ್ಣಾ ಎಂದು ಉಡುಪಿ ಶ್ರೀಕೃಷ್ಣನನ್ನು ತೋಳ್ತಕ್ಕೆಯಲ್ಲಿ ಬಿಗಿದಪ್ಪಿದ ಇವರ ಭಕ್ತಿಯನ್ನು ಕಂಡು ನಂತರದ ಹರಿದಾಸರೆಲ್ಲರೂ ಶ್ರೀಕೃಷ್ಣನ ಭಕ್ತಿಯೆಂಬ ಪ್ರೀತಿಯ ಮಹಾಪೂರವನ್ನೇ ಹರಿಸಿದರು.  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ಕುಲ ಕುಲ ಕುಲವೆಂದು ಹೊಡೆದಾಡದಿರಿ

Wed, 2008-12-03 11:11

ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ
ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ || ಪಲ್ಲವಿ ||

ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲ
ಕುಟಕಾಣಿಸ ಬಂದು ಹಿರಿದೇನು ಕಿರಿದೇನು
ನೆಟ್ಟನೆ ಸರ್ವಜ್ಞನ ನೆನೆಕಂಡ್ಯಾ ಮನುಜ || ೧ ||  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ಸಾರಿ ಬಂದನೆ ಪ್ರಾಣೇಶ ಬಂದನೆ

Wed, 2008-12-03 01:36

ರಾಗ ಹಿಂದೂಸ್ಥಾನಿ ಕಾಪಿ/ಅಟ್ಟ ತಾಳ

ಸಾರಿ ಬಂದನೆ ಪ್ರಾಣೇಶ ಬಂದನೆ || ಪಲ್ಲವಿ ||

ಸಾರಿ ಬಂದ ಲಂಕಾಪುರವ ಮೀರಿದ ರಾವಣನ ಕಂಡು
ಧೀರನು ವಯ್ಯಾರದಿಂದ || ಅನು ಪಲ್ಲವಿ ||

ವಾಯು ಪುತ್ರನೆ ಶ್ರೀರಾಮನ ದೂತನೆ ಪ್ರೀಯದಿಂದ
ಸೀತಾಂಗನೆಗೆ ಮುದ್ರಿಕೆಯ ತಂದಿತ್ತವನೆ || ೧ ||  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ

ನೋಡಿರಯ್ಯ ಹನುಮಂತನ ಮಹಿಮೆಯ

Wed, 2008-12-03 01:28

ರಾಗ ಶಂಕರಾಭರಣ/ಚಾಪು ತಾಳ

ನೋಡಿರಯ್ಯ ಹನುಮಂತನ ಮಹಿಮೆಯ
ಬೇಡಿರೋ ವರಗಳನು || ಪಲ್ಲವಿ ||

ರೂಢಿಯೊಳು ಇವನನ್ನು ಪಾಡಿ ಪೊಗಳುತಿಪ್ಪ ಜನರ
ನೋಡಿ ನೋಡಿ ವರವನೀವ ಗಾಡಿಕಾರ ಹನುಮನ್ನ || ಅನು ಪಲ್ಲವಿ ||

ಅಂದು ದಶರಥಸುತನಾಗಿ ಬಂದು ನಿಂದು ಸಾಕೇತದಿ  ಮುಂದೆ ಓದಿ »

Categories: ಕನ್ನಡ ಪುಟಗಳು, ವಿಶೇಷ
123next ›last »

Planet Kannada brought to you by Sampada Community via Sampada Foundation.
Setup and designed by Hari Prasad Nadig.

separator