ಸಂಪದದಲ್ಲಿ ಹೊಸತು! | Sign up | Login | Font Help
Planet Kannada | ಪ್ಲಾನೆಟ್ ಕನ್ನಡ
  • Sampada Initiative
  • Kannada Learning Center
  • Sampada Community
  • ಸಂಪರ್ಕಿಸಿ
Home › ಪ್ಲಾನೆಟ್ ಕನ್ನಡ

ಮಾಲ ರಾವ್

Syndicate content
MY THOUGHTS AND MY PHOTOGRAPHS
URL: http://chitra-durga.blogspot.com/
Updated: 4 hours 41 min ago

ಅತ್ತೂ ಅತ್ತೂ ಅಮ್ಮನಾಗುವ ಹೊತ್ತು....

5 hours 45 min ago

ಕಳೆದ ಹತ್ತು ದಿನಗಳಿಂದ ಗೆಳತಿಯೊಬ್ಬಳು ಅಳುತ್ತಿದ್ದಾಳೆ ಅವಳ ಅಮ್ಮ ಮರಳಿ ಬಾರದ ಊರಿಗೆ ಹೊರಟು ಹೋಗಿಬಿಟ್ಟಿದ್ದಾರೆಇವಳಿಲ್ಲಿ ಅಮೆರಿಕಾದ ಮರಳ ಕಣಿವೆಯಲ್ಲಿ ಕೂತು ದೂರದ ರಾಜ ಮಂಡ್ರಿಯಲ್ಲಿಕಳೆದು ಹೋದ ಅಮ್ಮನ ಮಡಿಲಿಗಾಗಿ ಕಣ್ತುಂಬಿ ಕೊಳ್ಳುತ್ತಿದ್ದಾಳೆ...ವಿಷಯ ಅಷ್ಟೇ ಆಗಿದ್ದರೆ ನಮ್ಮೆಲ್ಲರ ಮನ ಅಷ್ಟೋಂದು ಕದಡುತ್ತಿರಲಿಲ್ಲವೇನೋ....ಅಜ್ಜಿ ಕೈಲಿ ನೀರು ಹಾಕಿಸಿಕೊಂಡು ಎಣ್ಣೆ ತೀಡಿಸಿಕೊಂಡು ಮುದ್ದು ಹಣೆಗೊಂದು ಕಪ್ಪು ಬೊಟ್ಡಿಡಿಸಿಕೊಳ್ಳಲು ಆ ಪುಟಾಣಿ ಹುಡುಗಿ ಭೂಮಿಗೆ ಬರುವ ಮುನ್ನವೇ ಏನೋ ಅವಸರವಾಗಿ ಅಜ್ಜಿ ದಾಪುಗಾಲಿಟ್ಟುಕೊಂಡು ನಡೆದು ಹೋಗಿಬಿಟ್ಟಿದ್ದಾರೆನನ್ನ್ನ ಗೆಳತಿಗೀಗ ಎಂಟು ತಿಂಗಳು... ಅಮ್ಮನನ್ನು ಕಳೆದು ಕೊಂಡಿರುವ ಅವಳಿಗೆ ನಾವು ಯಾವ ಯಾವ ಮಾತುಗಳಿಂದ ತಾನೆ ಸಮಾಧಾನ ಹೇಳುವುದು???ಅತ್ತೂ ಅತ್ತೂ ಅಮ್ಮನಾಗುವ ಹೊತ್ತಿಗೆ ಎಷ್ಟು ಬಾಡಿ ಹೋಗಿ ಬಿಡುತ್ತಾಳೋ ಹುಡುಗಿ ಅಂತ ನಾವೆಲ್ಲಾ ಮಿಡುಕುತ್ತಿದ್ದೇವೆ
************ಗೆಳತೀ...ನಿನ್ನ ಚೆಂದದ ಮಗಳು ಸುಖವಾಗಿ ಹುಟ್ಟಲಿಚಿಗುರಿನ ಕನಸಿನಲ್ಲಿ ಮನದ ದುಗುಡ ಕಳೆಯಲಿಬಾನಲ್ಲಿ ನಕ್ಷತ್ರವಾದ ಅಮ್ಮನ ಕಣ್ಣಿನ ತಂಪು ಪುಟಾಣಿಯ ನೆತ್ತಿವರೆಗೆ ಪಸರಿಸಲಿಆಮೆನ್...
Categories: ಕನ್ನಡ ಪುಟಗಳು

ಸೀದು ಹೋಗುತಿದೆ ಹೂವಿನ ತೋಟ...

Thu, 2008-07-31 21:55
ದಿನವೂ ತೆರೆಯುವ ಬೆಳಗಿನ ಬಾನೊಳು ರಕ್ತದ ಕಲೆಗಳ ಛಾಯೆ ಇದೆ
ದಿನವೂ ಮುಚ್ಚುವ ಸಂಜೆಗತ್ತಲೊಳು ನೋವಿನ ದನಿಗಳ ಹುಯ್ಯಲಿದೆ


ದಟ್ಟಕತ್ತಲಿನ ಕಾರಿರುಳಲ್ಲಿ ಒಳಸಂಚಿನ ಪಿಸುಮಾತುಗಳು
ನೆಮ್ಮದಿಗಳ ಮನೆಬಾಗಿಲ ಬಡಿಯುವ
ಭಯ...
ಸಂಶಯ...
ಭಯ ಸಂಶಯಗಳ ಭೂತಗಳು


ದಿನಬೆಳಗಾದರೆ ಹತ್ಯಾಕಾಂಡದ ತತ್ತರಿಸುವ ದುರ್ವಾರ್ತೆಗಳು
ಮೂರು ಬಣ್ಣಗಳ ಧ್ವಜದೆತ್ತರಕು ಹಬ್ಬಿದ ಭೀತಿಯ ಜ್ವಾಲೆಗಳು
ಛಿಧ್ರವಾಗುತಿದೆ ಮುಗ್ಧ್ರರ ಬದುಕು ಕ್ಷುದ್ರಸ್ವಾರ್ಥಗಳ ಧಾಳಿಯಲಿ
ಸೀದುಹೋಗುತಿದೆ ಹೂವಿನ ತೋಟ ಕುರುಡು ಬೆಂಕಿಗಳ ಕುಣಿತದಲಿ


ವ್ಯರ್ಥವಾಗುತಿದೆ ಹಿರಿಯರು ಕಲಿಸಿದ
ಸತ್ಯ ಅಹಿಂಸೆಯ ಮಂತ್ರಗಳು
ಉಸಿರು ಕಟ್ಟಿಸುವ ದಟ್ಟ ಹೊಗೆಯೊಳಗೆ
ತಡವರಿಸುತ್ತಿವೆ ಹೆಜ್ಜೆಗಳು

_ಕೆ.ಸಿ. ಶಿವಪ್ಪ

**********
ನಾನು ಈ ಹಾಡು ಕೇಳಿದ್ದು ಸುಮಾರು ಹದಿನೈದು ವರ್ಷಗಳ ಹಿಂದೆ.
ಕವಿ ಈ ಕವಿತೆಯನ್ನು ಬರೆದು ಇನ್ನೂ ಹೆಚ್ಚು ವರ್ಷಗಳಾಗಿರಬಹುದು
ಪ್ರಕಾಶಿಸುತ್ತಿರುವ ಮೇರ ಮಹಾನ್ ಭಾರತದಲ್ಲಿ ಅದೇ ಪರಿಸ್ಥಿತಿಯನ್ನು ಮೇನೆಟೇನ್ ಮಾಡಿಕೊಂಡು ಬಂದಿರುವುದಕ್ಕೆ ನನಗೆ ಬಹಳ ಹೆಮ್ಮೆಯೆಸುತ್ತದೆ....

**********
ಕೆ.ಸಿ. ಶಿವಪ್ಪ ಅವರು ನನ್ನ ಮೆಚ್ಚಿನ ಕವಿಗಳಲ್ಲೊಬ್ಬರು ಹಲವಾರು ಸುಂದರ ಕವನಗಳನ್ನು ಬರೆದಿದ್ದಾರೆ
ಅವರ ಬಗ್ಗೆ ನನಗೆ ಹೆಚ್ಚೇನೂ ತಿಳಿದಿಲ್ಲ. ನಿಮಗ್ಯಾರಿಗಾದರೂ ವಿವರಗಳು ಗೊತ್ತಿದ್ದರೆ ಇಲ್ಲಿ ದಯವಿಟ್ಟು ಹಂಚಿಕೊಳ್ಳಿ
Categories: ಕನ್ನಡ ಪುಟಗಳು

ಅಕ್ಷರ ತೋಟದಲ್ಲಿ ಎರಡು ಹೊಸ ಹೂಗಳು

Tue, 2008-07-22 11:24
ಬರುವ ಭಾನುವಾರ ಕನ್ನಡ ಅಕ್ಷರ ತೋಟದಲ್ಲಿ ಎರಡು ಹೊಸ ಹೂಗಳು ಅರಳಲಿವೆ
ಕಂಪು ಸೂಸುತ್ತಾ 'ತುಳಸೀವನ' ಬಿರಿದರೆ,' ಭಾವಬಿಂಬ'ದಲ್ಲಿ ಜಗದೆಲ್ಲಾ ಚೆಲುವಿನ ಪ್ರತಿಬಿಂಬವಿದೆ
**************
ಆತ್ಮೀಯ ಗೆಳತಿಯರಾದ ಜ್ಯೋತಿ ಮತ್ತು ತ್ರಿವೇಣಿ ಇಬ್ಬರಿಗೂ ಅಭಿನಂದನೆಗಳು
ಕನ್ನಡದಲ್ಲಿ ಪುಸ್ತಕ ಪ್ರಕಟಿಸುವ ಉತ್ತಮ (ಸಾಹಸ)ಕಾರ್ಯ ಮಾಡುತ್ತಿರುವಿರಿ
*****************
ಮನದಲ್ಲಿ ಸದಾ ಚೈತ್ರವಿರಲಿ
ಹಸಿರೂ ಚಿಗುರೂ
ಕಂಪೂ ಇಂಪೂ
ತುಂಬಿಬರಲಿ
ನಿಮ್ಮ ಕನ್ನಡ ಪ್ರೀತಿಯ
ಅಕ್ಕರೆಯ
ಸಕ್ಕರೆಯ
ಬಿಂಬ
ನೂರ್ಕಾಲ ಉಳಿಯಲಿ....
Categories: ಕನ್ನಡ ಪುಟಗಳು

Planet Kannada brought to you by Sampada Community via Sampada Foundation.
Setup and designed by Hari Prasad Nadig.

separator